ಡ್ರಾಮಾ ಜೂನಿಯರ್ಸ್ ಒಂದು ಕನ್ನಡ ಭಾಷೆಯ ಪ್ರತಿಭಾ ಅನ್ವೇಷಣೆಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ 4 ರಿಂದ 14ರ ವಯಸ್ಸಿನ ಮಕ್ಕಳು ಭಾಗವಹಿಸುತ್ತಾರೆ. ಇದು 30 ಏಪ್ರಿಲ್ 2016 ರಂದು ಪ್ರಥಮ ಬಾರಿಗೆ ಝೀ ಕನ್ನಡದಲ್ಲಿ ಪ್ರಸಾರವಾಯಿತು. ಮೊದಲ ಸೀಸನ್‌ನಲ್ಲಿ ಜಂಟಿ ವೀಜೇತರಾಗಿ ಪುಟ್ಟರಾಜು ಮತ್ತು ಚಿತ್ರಾಲಿ ಹೊರಹೊಮ್ಮಿದರು . == ಕಾರ್ಯಕ್ರಮದ ಒಳನೋಟ == ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ರಿಯಾಲಿಟಿ ಶೋಗಳು ಸಂಗೀತ ಮತ್ತು ನೃತ್ಯಗಳ ಮೇಲೆ ಕೇಂದ್ರಿಕೃತವಾಗಿದೆ. ಆದರೆ, ಡ್ರಾಮ್ ಜೂನಿಯರ್ಸ್ ಕಾರ್ಯಕ್ರಮವು ಸ್ವಲ್ಪ ಭಿನ್ನವಾಗಿ ನಟನೆಯ ಮೇಲೆ ಕೇಂದ್ರೀಕರಿಸಿದೆ. ಈ ಕಾರ್ಯಕ್ರಮವು ಸಣ್ಣ ವಿಡಂಬನೆಯನ್ನು ನಟನೆ ಮಾಡಿ ತೋರಿಸಬಲ್ಲ ಮಕ್ಕಳ ಕುರಿತಾದ ಕಾರ್ಯಕ್ರಮವಾಗಿದೆ. ಡ್ರಾಮ ಜೂನಿಯರ್ಸ್ ಸೀಸನ್ ೫ರ ವೀಜೆತರಿಗೆ ೨೫ ಲಕ್ಷ ರೂಪಾಯಿ ಬೆಲೆಬಾಳುವ ೩೦*೪೦ ಸೈಟ್ ಬಹುಮಾನವಾಗಿ ದೊರಕಿದೆ. ಈ ಸೀಸನ್‌ನ ಮೊದಲ ರನ್ನರ್ ಆಫ್‌ಗೆ ೩ ಲಕ್ಷ ರೂಪಾಯಿಗಳು ಮತ್ತು ಎರಡನೇ ರನ್ನರ್ ಆಫ್‌ಗೆ ೧ ಲಕ್ಷ ರೂಪಾಯಿಗಳು ದೊರಕಿದೆ. ಸೀಸನ್ ೫ರ ರಂಗ ಮೇಷ್ಟ್ರುಗಳಾಗಿ ಅರುಣ್‌ ಸಾಗರ್‌ ಮತ್ತು ರಾಜು ತಾಳಿಕೋಟೆ ಕೆಲಸ ಮಾಡಿದ್ದಾರೆ. === ಸೀಸನ್‌ಗಳು === == ಸೀಸನ್ 1 == == ಸೀಸನ್ 3 == ಅನುಪ್ ಅನುರಾಗ್ ಅನ್ವಿಷಾ ಬಸವ ಕಿರಣ್ ಡಿಂಪನಾ ಕುಶಾಲ್ ಮಂಜು ನೇಹಾ ನಿತ್ಯ ಪ್ರಜ್ವಲ್ ಪ್ರಕ್ಷಿತ್ ಸಿಂಚನಾ ಸೋಮೇಶ್ ಶ್ರುಷ್ಟಿ ಸುಪ್ರಜಾ ಸ್ವಾತಿ ಸೀಸನ್ 3 ರ ಪ್ರಥಮ ದಿನಾಂಕ 20 ಅಕ್ಟೋಬರ್ 2018 ಆಗಿದೆ. ಗ್ರ್ಯಾಂಡ್ ಫಿನಾಲೆ 17 ಮಾರ್ಚ್ 2019 ರಂದು ತಿಪಟೂರಿನಲ್ಲಿ ನಡೆಯಿತು ಮತ್ತು ಇದು 24 ಮಾರ್ಚ್ 2019 ರಂದು ಪ್ರಸಾರವಾಯಿತು. ವಿಜೇತೆ - ಸ್ವಾತಿ (13 ವರ್ಷ, ಬೆಳಗಾವಿ) 1 ನೇ ರನ್ನರ್ ಅಪ್ - ಮಂಜು (11 ವರ್ಷ, ಕೊಪ್ಪಳ) 2 ನೇ ರನ್ನರ್ ಅಪ್ - ಡಿಂಪಾನಾ (5 ವರ್ಷ, ಹಾಸನ) == ಬಾಹ್ಯಕೊಂಡಿಗಳು == ಡ್ರಾಮ ಜೂನಿಯರ್ಸ್ ಕನ್ನಡ ಸೀಸನ್ 1 @ ಝೀ5 ಡ್ರಾಮ ಜೂನಿಯರ್ಸ್ ಕನ್ನಡ ಸೀಸನ್ 2 @ ಝೀ5 ಡ್ರಾಮ ಜೂನಿಯರ್ಸ್ ಕನ್ನಡ ಸೀಸನ್ 3 @ ಝೀ5 ಡ್ರಾಮ ಜೂನಿಯರ್ಸ್ ಕನ್ನಡ ಸೀಸನ್ 4 @ ಝೀ5 ಡ್ರಾಮ ಜೂನಿಯರ್ಸ್ ಕನ್ನಡ ಸೀಸನ್ 5 @ ಝೀ5 == ಉಲ್ಲೇಖಗಳು ==